ಹಿಂದೂ ಸಮಾಜವನ್ನು ಬಲಯುತವನ್ನಾಗಿಸುವುದು ಸಮಾಜದಲ್ಲಿನ ದೌರ್ಬಲ್ಯ ಹಾಗೂ ಕೊರತೆಗಳನ್ನು ನೀಗಿಸುವ ಮೂಲಕ. ಅದಕ್ಕಾಗಿ ಮಾಡುವ ಸೇವಾ ಕಾರ್ಯ ಶೀಘ್ರ ಹಾಗೂ ಶಾಶ್ವತ ಪರಿಣಾಮ ಬೀರುವಂತಿರಬೇಕು ಎಂಬ ಪ.ಪೂ. ಡಾ ಗುರೂಜಿ ಅರ ಸೇವಾ ಕಲ್ಪನೆಯಂತೆ “ಸೇವಾ ಭಾರತಿ ಕನ್ಯಾಡಿ ೨” ಗ್ರಾಮ ವಿಕಾಸಕ್ಕಾಗಿ ಸೇವಾ ಚಟುವಟಿಕೆಯನ್ನು ಹಮ್ಮಿಕೊಂಡು ಅಭಿವೃದ್ಧಿಯ ಪಥದಲ್ಲಿದೆ.
೨೦೦೪ ರಲ್ಲಿ ಅಖಿಲ ಭಾರತೀಯ ಮಟ್ಟದ ಸೇವಾ ಭಾರತಿಯ ಸ್ಥಳೀಯ ವಿಭಾಗವನ್ನು ಹಿರಿಯರ ನೆರವಿನಂತೆ ಹುಟ್ಟುಹಾಕಲಾಯಿತು. ೨೦೦೮ರಲ್ಲಿ ನೋಂದಾವಣೆಗೊಂಡಿತು.
ಗ್ರಾಮ ವಿಕಾಸ ಚಟುವಟಿಕೆಯೊಂದಿಗೆ ಪರಿಸರಪೂರಕ ಕೃಷಿ ಚಟುವಟಿಕೆ ಹಾಗೂ ಜಾಗೃತಿ, ಆರೋಗ್ಯ ಶಿಬಿರ , ಮಾತೃಮಂಡಳಿ, ಶಿಕ್ಷಣ, ಬಾಲಗೋಕುಲ, ಸಂಸ್ಕಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಊರಿನ ನಾಗರೀಕರಿಗೆ ಅತೀ ಕಡಿಮೆ ಮೊತ್ತದಲ್ಲಿ ಸಂಸ್ಥೆಯ ಅಡುಗೆ ಪಾತ್ರೆಗಳು, ಕುರ್ಚಿಗಳನ್ನು ನೀಡುತ್ತಿದ್ದೇವೆ.